ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದಲ್ಲಿ ಕಳೆದ ಪೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದ ಒಂದರಲ್ಲಿ ಆರೋಪಿಗಳನ್ನು ರಿಪ್ಪನ್ ಪೇಟೆಯ ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಬಿದರಹಳ್ಳಿ ಸಮೀಪದ ಮಂಡ್ಲಿ ಗ್ರಾಮದ ಪುರೋಹಿತ ವೃತ್ತಿ ಮಾಡುವ ಸ್ವಾಮಿ ಹಾಗೂ ಕುಟುಂಬಸ್ಥರು ಫೆಬ್ರವರಿ 15 ರಂದು ಹಾವೇರಿ ಜಿಲ್ಲೆಯ ದೇವಸ್ಥಾನಕ್ಕೆ ತೆರಳಿ ಹಿಂದಿರುಗಿದಾಗ ಮನೆಯ ಹಿತ್ತಲ ಬಾಗಿಲನ್ನು ಬಾಗಿಲು ಮುರಿದು ಹೊಳಹಕ್ಕಿ ಬೆಡ್ ರೂಮ್ ನಲ್ಲಿದ್ದ ಗಾಡ್ರೇಜ್ ಮುರಿದು (ಒಂದು ಲಕ್ಷದ ಐದು ಸಾವಿರ) ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಲಾಗಿತ್ತು, ಈ ಬಗ್ಗೆ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ರಿಪ್ಪನ್ ಪೇಟೆ ಪೊಲೀಸರು ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ಖಲೀಲ್ ಖಾನ್ , ಅಬ್ದುಲ್ ಶಫೀಕ್ , ಸೈಯದ್ ಜಾವೀದ್ ರವರನ್ನು ಬಂಧಿಸಿ ಕದ್ದ ಬೆಲೆಬಾಳುವ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ರಾಮಚಂದ್ರ ಹಾಗೂ ಮಧುಸೂಧನ್ ಇದ್ದರು.