
ರಿಪ್ಪನ್ ಪೇಟೆ ಭಾಗವು ಒಂದು ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಪ್ರದೇಶವಾಗಿದ್ದು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 58ನೇ ವರ್ಷದ ಗಣಪತಿ ಅದ್ದೂರಿ ಮೆರವಣಿಗೆಯೊಂದಿಗೆ ವಿನಾಯಕ ವೃತದಲ್ಲಿ ಹಿಂದೂ ಧ್ವಜಾರೋಹಣ ಮಾಡಿ ಮೆರವಣಿಗೆಯೊಂದಿಗೆ ಪೂಜೆ ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಇದೇ ಸಮಯದಲ್ಲಿ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿಯೂ ಕೂಡ ಗಣಪತಿಯನ್ನು ಕೂರಿಸಿ ಪ್ರತಿ ವರ್ಷದಂತೆ ಅದ್ದೂರಿಯಾಗಿ ಪೂಜೆಯನ್ನು ನೆರವೇರಿಸಿ ಸಿಬ್ಬಂದಿ ವರ್ಗದವರೆಲ್ಲರೂ ಶ್ರದ್ಧೆ ಭಕ್ತಿಯೊಂದಿಗೆ ಪೂಜೆಯನ್ನು ಸಲ್ಲಿಸಿದರು.