
ಚಿನ್ಮನೆ ಗ್ರಾಮದ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಭೀಕರವಾಗಿ ಮರದ ಕೊಂಬೆ ಮುರಿದುಬಿದ್ದು ಕಾರು ಮುಂಭಾಗ ಪೂರ್ತಿಯಾಗಿ ಡ್ಯಾಮೇಜ್ ಆಗಿದೆ ಇದರಿಂದಾಗಿ ಕಾರಿನ ಒಳಭಾಗದಲ್ಲಿ ಇರುವ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರ ಜೀವಕ್ಕೆ ದೊಡ್ಡ ಅನಾಹುತದಿಂದ ತಪ್ಪಿದೆ.
KA 20 AC 4143 ಮಾರುತಿ ಸ್ವಿಫ್ಟ್ ಕಾರ್ ಶಿವಮೊಗ್ಗದಿಂದ ಚಿನ್ಮನೆ ಕಡೆಗೆ ಆಗಮಿಸುತ್ತಿರುವ ಈ ಕಾರಿನ ಮೇಲೆ ಮರೆದ ಕೊಂಬೆ ಬಿದ್ದಿದ್ದರಿಂದ ಕಾರಿನ ಚಾಲಕರಿಗಾಗಲಿ ಹಾಗೂ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ ಅದೃಷ್ಟವಶಾತ್ ಭೀಕರ ಘಟನೆಯಿಂದ ಪಾರಾಗಿದ್ದಾರೆ.
ಅಕ್ಕ ಪಕ್ಕದ ಸ್ಥಳೀಯರು ತಕ್ಷಣ ಓಡಿಬಂದು ಗಾಯಕ್ಕೆ ಒಳಗಾದವರನ್ನು ಕಾರ್ಯನಿಂದ ಹೊರ ತೆಗೆದು ಸಮೀಪದ ಚಿಕಿತ್ಸೆಗಾಗಿ ಅವರನ್ನು ಕರೆದೊಯ್ದರು ಎಂದು ಸ್ಥಳಿಯ ಮೂಲಗಳಿಂದ ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಾಗಿದೆ
ಮಾರುತಿ ಸ್ವಿಫ್ಟ್ ಕಾರಿನ ಮೇಲ್ಭಾಗ ಹಾಗೂ ಕಾರಿನ ಮುಂಭಾಗ ಸಂಪೂರ್ಣವಾಗಿ ಡ್ಯಾಮೇಜ್ ಆಗಿದೆ.
ರಸ್ತೆ ಮಧ್ಯ ಬಿದ್ದ ಮರವನ್ನು ಊರಿನ ಗ್ರಾಮಸ್ಥರ ಸಹಾಯದಿಂದ ತೆರವುಗೊಳಿಸಲಾಯಿತು, ಹಾಗೂ ಈ ಘಟನೆಯಿಂದಾಗಿ ಕೆಲಕಾಲ ಶಿವಮೊಗ್ಗದಿಂದ ಹಾಗೂ ಹೊಸನಗರ ಭಾಗದಿಂದ ಚಲಿಸುವ ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯವಸ್ಥೆಗೊಂಡಿತು.