
ಶ್ರೀ ಕ್ಷೇತ್ರ ತೀರ್ಥಳ್ಳಿ ತಾಲೂಕಿನ ಅಲಸೆ ಅಮ್ಮನವರ ದೇವಸ್ಥಾನಕ್ಕೆ ಸರ್ಕಾರದಿಂದ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ದೇವಸ್ಥಾನಕ್ಕೆ ಸುಮಾರು ವರ್ಷಗಳ ಇತಿಹಾಸವಿದ್ದು ಪುಣ್ಯಕ್ಷೇತ್ರವೆಂದೆನಿಸಿಕೊಂಡಿದ್ದ ಸಾವಿರಾರು ಭಕ್ತರು ಇಲ್ಲಿಗೆ ಬರಲು ಬಲು ಕಷ್ಟಕರವಾಗಿ ಬರುತ್ತಿದ್ದರು. ಸುತ್ತಮುತ್ತಲು ಸಾಕಷ್ಟು ಹಳ್ಳಿಯಿಂದ ತುಂಬಿದ ಈ ಪ್ರದೇಶವು ಒಂದು ಸುಂದರವಾದ ಕ್ಷೇತ್ರವಾಗಿದೆ.
ಈ ಪ್ರದೇಶವು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿಂದ ತುಂಬಿದ್ದು ಇಲ್ಲಿನ ಭಕ್ತಾದಿಗಳಿಗೆ ಓಡಾಡಲು ವಾಹನಗಳ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಜನರು ಪರದಾಡುವಂತಹ ಸಂಕಷ್ಟದಲ್ಲಿ ಇರುತ್ತಿದ್ದರು ಇದನ್ನು ಗಮನಿಸಿದ ಊರಿನ ಜನರು ಹಾಗೂ ಭಕ್ತರೊಂಧದವರು ದೇವಸ್ಥಾನದ ಕಮಿಟಿ ವರ್ಗದವರು ಎಲ್ಲರೂ ಸೇರಿ ಒಂದು ಬಸ್ಸಿನ ವ್ಯವಸ್ಥೆ ಮಾಡಬೇಕೆಂದು ಈ ಹಿಂದೆನೇ ಸರ್ಕಾರದ ಗಮನಕ್ಕೆ ತಂದಿದ್ದರು.
ಈ ಒಂದು ಪುಣ್ಯಕ್ಷೇತ್ರಕ್ಕೆ ಇದೀಗ ಸರ್ಕಾರದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಈ ಕೆಳಗಂಡಂತೆ ಬಸ್ಸಿನ ಸಮಯವನ್ನು ವಿವರಿಸಲಾಗಿದೆ.
ಈ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಂತಹ ತೀರ್ಥಹಳ್ಳಿ ತಾಲೂಕಿನ ಶ್ರೀಯುತ ಆರ್ಗ ಜ್ಞಾನೇಂದ್ರ ಶಾಸಕರು, ಹಾಗೂ ಸಾಗರ ಮತ್ತು ಹೊಸನಗರ ಕ್ಷೇತ್ರದ ಶಾಸಕರಾದ ಹಾಗೂ ಕೈಗಾರಿಕಾ ನಿಯಮ ಮಂಡಳಿ ಅಧ್ಯಕ್ಷರು ಆಗಿರುವಂತಹ ಶ್ರೀಯುತ ಬೇಲೂರು ಗೋಪಾಲಕೃಷ್ಣ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಮಧು ಬಂಗಾರಪ್ಪ ಇವರಿಗೆ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಊರಿನ ಎಲ್ಲಾ ಹಿರಿಯ ಗ್ರಾಮಸ್ಥರು ನಾಗರಿಕರು ಹಾಗೂ ಭಕ್ತಾದಿ ವೃಂದದವರು ಅಭಿನಂದನೆ ಸಲ್ಲಿಸಿದರು.
✍️ Dr. ಶ್ವೇತಾ ಜಿ ಎನ್ ಆಚಾರ್ಯ

ಈ ಒಂದು ಕ್ಷೇತ್ರಕ್ಕೆ ರಸ್ತೆ ವ್ಯವಸ್ಥೆಯು ಅವಶ್ಯಕತೆ ಇರುವುದರಿಂದ ಅದನ್ನು ಕೂಡ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮಾಡಿಕೊಟ್ಟರೆ ಸುತ್ತಮುತ್ತಲಿನ ಜನಕ್ಕೆ ದೇವಸ್ಥಾನಕ್ಕೆ ಆಗಮಿಸಲು ಸಹಾಯವಾಗುತ್ತದೆ