ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರೀ )

 ಭಟ್ಕಳ ತಾಲೂಕು ಘಟಕ ಉತ್ತರ ಕನ್ನಡ ಜಿಲ್ಲೆ.

 ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ 28. 01.2026. ಈ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಭಾಗದಿಂದ ಆಗಮಿಸಿರುವ ಪತ್ರಕರ್ತರ ವಿಚಾರಣಾ ಸಂಕಿರಣ ಕಾರ್ಯಕ್ರಮವು  ಯಶಸ್ವಿಯಾಗಿ ನಡೆದಿದೆ.

ಒತ್ತಡಕ್ಕೆ ಒಳಗಾಗದೇ ಪತ್ರಿಕಾ ಧರ್ಮ ಪಾಲನೆ ಅಗತ್ಯ – ಶ್ರೀ ಮಾರುತಿ ಗುರೂಜಿ

ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಜವಾಬ್ದಾರಿ ಅಪಾರ

ಭಟ್ಕಳ: ಪತ್ರಕರ್ತರು ಯಾವುದೇ ಒತ್ತಡಕ್ಕೂ ಮಣಿಯದೆ ಸಮಾಜದ ಹಿತವನ್ನು ಮೊದಲಿಗಿಟ್ಟು ಪತ್ರಿಕಾ ಧರ್ಮ ಪಾಲಿಸಬೇಕು. ಸತ್ಯನಿಷ್ಠ ಲೇಖನಿಯಲ್ಲಿ ಚ್ಯುತಿ ಉಂಟಾದರೆ ಅದರ ಪರಿಣಾಮ ಸಮಾಜದ ಮೇಲೆ ಗಂಭೀರವಾಗಿ ಬೀರುವ ಸಾಧ್ಯತೆ ಇದೆ ಎಂದು ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರಿಕೆ ನೀಡಿದರು.

ನಗರದ ಶ್ರೀ ನಾಗಯಕ್ಷ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆಯ ಭಟ್ಕಳ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಅಸಮತೋಲನಗಳನ್ನು ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದು. ಈ ದಿಸೆಯಲ್ಲಿ ಎಲ್ಲ ಪತ್ರಕರ್ತರೂ ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ರಾಜ್ಯದ ಸ್ಥಿತಿಗತಿಗಳನ್ನು ನೈಜವಾಗಿ ಜನರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಹೊತ್ತಿದೆ ಎಂದು ಅವರು ಹೇಳಿದರು.

ಸುದ್ದಿ ಪ್ರಸಾರದಲ್ಲಿ ತುರ್ತುಪಡುವ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೂ ಕುಟುಂಬದ ಜವಾಬ್ದಾರಿಗಳಿವೆ ಎಂಬುದನ್ನು ಸರ್ಕಾರ ಮನಗಾಣಬೇಕು. ಪತ್ರಕರ್ತರು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಸಾಮಾಜಿಕ ನ್ಯಾಯ ಒದಗಿಸಬೇಕು. ಈ ದಿಸೆಯಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ಮಾರುತಿ ಗುರೂಜಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ ಗೋವಿಂದ ಪೂಜಾರಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುವಲ್ಲಿ ಪತ್ರಕರ್ತರ ಪಾತ್ರ ಅನನ್ಯವಾಗಿದೆ. ಪತ್ರಕರ್ತರ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಟ್ರಸ್ಟ್ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ಹಿರಿಯ ವರದಿಗಾರ ಗಂಗಾಧರ್ ಮೊದಲಿಯರ್ ಮಾತನಾಡಿ, ಪತ್ರಕರ್ತರನ್ನು ಭಯೋತ್ಪಾದಕರಂತೆ ಕಾಣುವ ಮನೋಭಾವ ಕೆಲವು ಕಡೆಗಳಲ್ಲಿ ಕಂಡುಬರುತ್ತಿರುವುದು ದುಃಖಕರ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಗಟ್ಟಿಯಾದ ನೆಲೆಯಲ್ಲಿ ನಿಂತು ತಮ್ಮ ಮಧ್ಯಮ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಪತ್ರಿಕೋದ್ಯಮದಲ್ಲಿ ವೇಗವಾಗಿ ಬದಲಾವಣೆಗಳು ನಡೆಯುತ್ತಿದ್ದು, ತಾಂತ್ರಿಕ ಬೆಳವಣಿಗೆಗೆ ತಕ್ಕಂತೆ ಮಾಧ್ಯಮ ಕ್ಷೇತ್ರವೂ ಹೊಂದಿಕೊಳ್ಳಬೇಕಿದೆ. ಇಂತಹ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭಗಳು ಹಾಗೂ ವಿಚಾರ ಸಂಕಿರಣಗಳು ಹೊಸ ಪತ್ರಕರ್ತರಿಗೆ ಪ್ರೇರಣೆಯಾಗುತ್ತವೆ ಎಂದರು.

ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಮೂರು ವರ್ಷಗಳಲ್ಲಿ ಸಂಘಟನೆ 26 ಜಿಲ್ಲೆಗಳಿಗೆ ವಿಸ್ತರಿಸಿದೆ. ಪತ್ರಕರ್ತರ ಮಾಸಾಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕಾನಿಪ ಧ್ವನಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ್ ದೈವಜ್ಞ, ಉಡುಪಿ ಜಿಲ್ಲಾಧ್ಯಕ್ಷ ದಾಮೋದರ ಮೊಗವೀರ, ಅಂಕೋಲಾ ತಾಲೂಕು ಅಧ್ಯಕ್ಷ ಮಾರುತಿ, ಶಿರಸಿ ತಾಲೂಕು ಅಧ್ಯಕ್ಷ ರಾಜೇಶ್ ಮೊಗೇರ್, ಮುಂಡಗೋಡ್ ತಾಲೂಕು ಅಧ್ಯಕ್ಷ ಸಂತೋಷ್ ದೈವಜ್ಞ, ಭಟ್ಕಳ ತಾಲೂಕು ಪದಾಧಿಕಾರಿಗಳಾದ ಶಂಕರ ನಾಯ್ಕ, ಉಲ್ಲಾಸ್ ಶಾನ್ ಬಾಗ್, ನಸೀಬ್ ಮುಲ್ಲಾ ಘನಿ, ಜಾವಿದ್ ಸಿಂಗೇರಿ, ಡಿಎಫ್‌ಒ ಯೋಗೇಶ್, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ರಿಪ್ಪನ್ ಪೇಟೆಯಲ್ಲಿ ದುರ್ಘಟನೆ: SSLC ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ರಿಪ್ಪನ್ ಪೇಟೆಯಲ್ಲಿ ದುರ್ಘಟನೆ: SSLC ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು   ರಿಪ್ಪನ್ ಪೇಟೆ ಪಟ್ಟಣದ ಸಮೀಪದ ಬರುವೆ ಗ್ರಾಮದಲ್ಲಿ ಭೀಕರ ದುರ್ಘಟನೆಯೊಂದು ಸಂಭವಿಸಿದೆ. ಗದ್ದೆಯೊಳಗಿನ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, SSLC ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಮದೀನಾ ಕಾಲೋನಿ ನಿವಾಸಿ ಮಹಮ್ಮದ್…

    Continue reading
    ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

    ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ   ​ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ನೆಲೆಸಿರುವ ಸಕಲ ಇಷ್ಟಾರ್ಥ ಪ್ರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವವು ಇದೇ ಬರುವ ಏಪ್ರಿಲ್…

    Continue reading

    You Missed

    ರಿಪ್ಪನ್ ಪೇಟೆಯಲ್ಲಿ ದುರ್ಘಟನೆ: SSLC ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ರಿಪ್ಪನ್ ಪೇಟೆಯಲ್ಲಿ ದುರ್ಘಟನೆ: SSLC ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

    ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

    ಏಪ್ರಿಲ್.5, 6ರಂದು ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಹೊಸನಗರದಲ್ಲಿ ಬೃಹತ್ ಪಾದಯಾತ್ರೆ

    ಏಪ್ರಿಲ್.5, 6ರಂದು ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಹೊಸನಗರದಲ್ಲಿ ಬೃಹತ್ ಪಾದಯಾತ್ರೆ

    ಶೀಘ್ರದಲ್ಲೇ ‘ಲಕ್ಕಿ ಡ್ರಾ ಬಹುಮಾನ’ ಘೋಷಣೆ ದಿನಾಂಕ ಪ್ರಕಟ: ‘ರಿಪ್ಪನ್ ಪೇಟೆ ಕಲಾಕೌಸ್ತುಭ ಕನ್ನಡ ಸಂಘ’ ಸ್ಪಷ್ಟನೆ

    ಶೀಘ್ರದಲ್ಲೇ ‘ಲಕ್ಕಿ ಡ್ರಾ ಬಹುಮಾನ’ ಘೋಷಣೆ ದಿನಾಂಕ ಪ್ರಕಟ: ‘ರಿಪ್ಪನ್ ಪೇಟೆ ಕಲಾಕೌಸ್ತುಭ ಕನ್ನಡ ಸಂಘ’ ಸ್ಪಷ್ಟನೆ

    ತುಮಕೂರು ಕೆ.ಬಿ. ಕ್ರಾಸ್ ನಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣವಿಲ್ಲದೆ ಬಯಲೇ ಗತಿ!

    ತುಮಕೂರು ಕೆ.ಬಿ. ಕ್ರಾಸ್ ನಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ದಾಣವಿಲ್ಲದೆ ಬಯಲೇ ಗತಿ!

    ಸಾಗರ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸಮಸ್ಯೆ ಪರಿಹರಿಸಿ: ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಕೆ.

    ಸಾಗರ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸಮಸ್ಯೆ ಪರಿಹರಿಸಿ: ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಕೆ.