ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ|
ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಿಜೆಪಿ ಮಂಡಲ ಶನಿವಾರ ಕೈಗೊಂಡ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ,
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಗಿದ್ದ ಬಳಿಕ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಸಂಪೂರ್ಣವಾಗಿ ಹಿನ್ನಡೆ ಕಂಡು ಬಂದಿದೆ. ಹೊಸನಗರ ತಾಲೂಕಿನ ಅಧಿಕಾರಿಗಳು ಶಾಸಕರ ಮತ್ತು ಅವರ ಹಿಂಬಾಲಕರ ಕೈಗಂಬೆಯಾಗಿ ಕೆಲಸ ಮಾಡುತ್ತಿದ್ದು ಬಡವರಿಗೆ, ರೈತರಿಗೆ ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಮನದಾಳದ ನೋವನ್ನು ನೋಡಿಕೊಂಡಿದ್ದಾರೆ. ತಾಲೂಕು ಕಚೇರಿಯ ಅವಣದಲ್ಲಿ ಬಿಜೆಪಿ ಮಂಡಲ ಪ್ರತಿಭಟನೆ ನಡೆಸಿ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಅಭಿವೃದ್ಧಿಯ ವಿಷಯದಲ್ಲಿ ಎಡವಿದ್ದಾರೆ ಬಡವರ ಹಾಗೂ ರೈತರ ಪರ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ ಹಾಗೂ ರೈತರ ಬಗರಕುಂ ಸಾಗುವಳಿ ಜಮೀನು ತೆರವುಗೊಳಿಸಿದಷ್ಟೇ ಇಲ್ಲಿವರೆಗಿನ ಸಾಧನೆ ಆಗಿದೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಸ್ಥಳೀಯ ಶಾಸಕರು ಅಧಿಕಾರಿ ವರ್ಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲ ಅಧಿಕಾರಿಗಳು ಸಹ ಶಾಸಕರ ಹೇಳಿದಂತೆ ವರ್ತಿಸುತ್ತಿದ್ದಾರೆ. ಇದು ಆಡಳಿತದ ವೈಫಲ್ಯಕ್ಕೆ ಕಾರಣವಾಗಿದೆ.
ಆರ್. ಎಸ್. ಎಸ್ ವಿರುದ್ಧ ಬೇಲೂರು ಗೋಪಾಲಕೃಷ್ಣ ( ಬ್ರಿಟಿಷರನ್ನೇ ಓಡಿಸಿದ ಈ ನಮ್ಮ ಕಾಂಗ್ರೆಸ್ ಪಕ್ಷವು ಆರ್. ಎಸ್. ಎಸ್ ಯಾವ ಲೆಕ್ಕ) ಇವರು ಹತ್ತು ವರ್ಷದ ಹಿಂದೇನೆ ಆರ್ ಎಸ್ ಎಸ್ ಚಡ್ಡಿ ಹಾಕಿಕೊಂಡು ಬಿಜೆಪಿಯಿಂದನೇ ಶಾಸಕರಾದವರು ಅದನ್ನು ಮರೆತಂತೆ ಕಾಣುತ್ತಿದೆ, ಆರ್ ಎಸ್ ಎಸ್ ಅನ್ನು ಭಾರತ ದೇಶದಿಂದ ಓಡಿಸಲು ಇವರಿಂದ ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಮಾತನಾಡಿದರು.
ತಹಸಿಲ್ದಾರ್ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ವಿವಿಧ ಇಲಾಖೆಯ ಇಂಜಿನಿಯರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹುದ್ದೆಗಳು ಹಾಗೆ ಖಾಲಿ ಉಳಿದಿವೆ. ಹಳ್ಳಿಯಿಂದ ಬಂದ ಜನಸಾಮಾನ್ಯರು ಅವರ ಅಹವಾಲು ಸಲ್ಲಿಸಲು ಕಚೇರಿಗೆ ಬಂದರೆ ಯಾರು ಕೇಳುವಂತವರಿಲ್ಲ.ತಾಲೂಕಿನ ಬಹುತೇಕ ರಸ್ತೆಗಳು ಕೂಡ ಹೋಂಡಾ ಬಿದ್ದರೂ ಮುಚ್ಚುವವರಿಲ್ಲ ದಂತಹ ಸ್ಥಿತಿಯಾಗಿದೆ ಮೊದಲು ಅಭಿವೃದ್ಧಿಯ ಕಡೆಗೆ ಗಮನಹರಿಸಲಿ ಎಂದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎನ್ ಆರ್ ದೇವನಂದ. ಉಮೇಶ್ ಕಂಚುಗಾರ್. ಹಾಲ್ಗದ್ದೆ ಉಮೇಶ್. ಎನ್ ಶ್ರೀಧರ ಉಡುಪ. ವೀರೇಶ್ ಆಲವಳ್ಳಿ. ಆರ್ ಟಿ ಗೋಪಾಲ. ಸುರೇಶ್ ಸ್ವಾಮಿರಾವ್. ನಾಗರ್ಜುನ ಸ್ವಾಮಿ. ಸತ್ಯನಾರಾಯಣ. ಚಾಲುಕ್ಯ ಬಸವರಾಜ್ ಚಾಲುಕ್ಯ ಬಸವರಾಜ್. ಶ್ರೀಪತಿರಾವ್ ಮಂಡನಿ ಮೋಹನ್ ಅಭಿಲಾಶ್ ಮಂಜುನಾಥ್ ಸಂಜೀವ. ಸುರೇಶ್ ಬಂಕ್ರಿ ಬಿಡು ಮಂಜುನಾಥ, ಪುರುಷೋತ್ತಮ ಶಾನುಭೋಗ್, ನರಲೇ ರಮೇಶ್ ಮಾವಿನಕಾಯಿಪ್ಪ ಗೌತಮ್ ಮಹೇಂದ್ರ.
ಮಹಿಳಾ ಮೋರ್ಚಾದ ಮಹಿಳೆಯರು ಕೂಡ ಪಾಲ್ಗೊಂಡಿದ್ದು, ನಾಗರತ್ನ ದೇವರಾಜ್, ಶಶಿಕಲಾ ಸುಮಾ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಟಿ ನಾಗರತ್ನಮ್ಮ ತಾಲೂಕು ಉಪಾಧ್ಯಕ್ಷರಾದ ಮಂಜುಳಾ ಕೇತರ್ಜಿ, ಪದ್ಮ ಸುರೇಶ್ , ನಿರ್ಮಲ, ಸೀತಮ್ಮ, ಗೀತಾ ಕರಿಬಸಪ್ಪ, ಅಶ್ವಿನಿ ರವಿಶಂಕರ್, ರೇಖಾ, ಆಶಾ ರವೀಂದ್ರ, ಸುಗುಣ. ಹಾಜರಿದ್ದರು.






