
ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ , ಹೊಸನಗರ ತಾಲೂಕು.
ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ
ವಾಲಿಬಾಲ್ ವಾಲಿಬಾಲ್ ಪಂದ್ಯಾವಳಿಯನ್ನು 3 ಜನವರಿ 2026 ತಳಲೆ ಗ್ರಾಮದಲ್ಲಿ ನಡೆಸಲಾಗುತ್ತಿದೆ.
ವಾಲಿಬಾಲ್ ಪಂದ್ಯಾವಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೇಯಸ್ ಚುಡಾವಣೆ, ಉಪಾಧ್ಯಕ್ಷರಾದ ಶ್ರೀ ಆಸಿಫ್ ಮೂಗುಡ್ತಿ, ಕಾರ್ಯದರ್ಶಿಯಾದ ಶ್ರೀ ವೆಂಕಟೇಶ್, ಖಜಾಂಜಿಯಾದ ಶ್ರೀ ರಾಕೇಶ್ ಕಗ್ಗಲಿ, ಹಾಗೂ ಈ ಸಮಿತಿಯ ಎಲ್ಲಾ ಕ್ರೀಡಾ ಅಭಿಮಾನಿಗಳು ಮತ್ತು ಊರಿನ ಸರ್ವ ಸದಸ್ಯರು ಗ್ರಾಮಸ್ಥರು.
ಮೂರನೇ ಪಂದ್ಯಾವಳಿಯನ್ನು ವಿಶೇಷವಾಗಿ ಹಮ್ಮಿಕೊಂಡಿದ್ದು ಇದು ಗ್ರಾಮಸ್ಥರಿಗೆ ಹಾಗೂ ಕ್ರೀಡಾಪಟುಗಳಿಗೆ ಆಸಕ್ತಿದಾಯಕವಾಗಿದ್ದು ಕ್ರೀಡೆಗಳು ಕಳೆದು ಹೋಗಬಾರದೆಂದು ಹೀಗೆ ಹಳ್ಳಿಹಳ್ಳಿಯಲ್ಲಿ ಆಯೋಜಿಸಲಾಗುತ್ತಿದ್ದ ಕಾರಣ ಇನ್ನೂ ಇಂತಹ ಕ್ರೀಡೆಗಳು ಅಳಿಸಿ ಹೋಗಬಾರದೆಂದು ಆಯೋಜಿಸಿರುವ ಈ ಕಾರ್ಯಕ್ರಮವು ಎಲ್ಲಾ ಕ್ರೀಡಾಪಟುಗಳಿಗೆ ಹೆಮ್ಮೆಯ ವಿಚಾರವಾಗಿದೆ.
ಆಗಮಿಸುವ ಕ್ರೀಡಾಪಟುಗಳಿಗೆ ವಿಶೇಷವಾದ ಸೂಚನೆಯನ್ನು ನೀಡಲಾಗಿದೆ. ಪಂದ್ಯದಲ್ಲಿ ಗೆದ್ದವರಿಗೆ ವಿಶೇಷವಾದ ಬಹುಮಾನಗಳು ನೀಡಲಾಗುತ್ತಿದೆ.








