ತುರ್ತು ಪರಿಸ್ಥಿತಿ ಇಂದಿಗೆ 50 ವರ್ಷ ಕಳೆದ ಒಂದು ಕರಾಳ ದಿನ.
ಬಿಜೆಪಿ ಹೊಸನಗರ ಮಂಡಲ ಇವರ ನೇತೃತ್ವದಲ್ಲಿ ನಡೆದ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರ್ಯಗಳ ಹರಣ, ಭಾರತದ ಇತಿಹಾಸದಲ್ಲಿನ ಒಂದು ಕರಾಳ ಅಧ್ಯಾಯ.
ಹೊಸನಗರ ತಾಲೂಕು ರಿಪ್ಪನ್ ಪೇಟೆಗೆ ಆಗಮಿಸಿರುವಂತಹ ಶಿವಮೊಗ್ಗ ಜಿಲ್ಲಾ ಶಾಸಕರಾದ ಶ್ರೀಯುತ ಚನ್ನಬಸಪ್ಪ,,,, ಉತ್ತಮ ಭಾಷಣಕಾರರಿಂದ ಹೆಸರುವಾಸಿಯಾಗಿರುವ ಸಂಘಟನಾತ್ಮಕ ಶಕ್ತಿಯನ್ನು ಹೊಂದಿರುವ, ಸದಾ ಹಸನ್ಮುಖಿಯಾಗಿ ಒಂದು ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವಂತಹ ಎಲ್ಲರನ್ನೂ ಪ್ರೀತಿಯಿಂದ ಸಹನೆಯಿಂದ ಕಾಣುವಂತಹ ಹಾಗೂ ಅವರು ರಿಪ್ಪನ್ ಪೇಟೆಯ ರಾಮಮಂದಿರಕ್ಕೆ ಆಗಮಿಸಿ ಅಂದಿನ ಕರಾಳ ದಿನದ ಬಗ್ಗೆ ಕುರಿತು ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡಿ ತಾವು ಅನುಭವಿಸಿರುವಂತಹ ನೋಡಿರುವಂತಹ ವಿಚಾರಧಾರೆಗಳನ್ನು ಹಂಚಿಕೊಂಡಿದ್ದರು…
ಈ ಸಂದರ್ಭದಲ್ಲಿ ಆ ಒಂದು ಸಮಯದಲ್ಲಿ ಹೋರಾಟಗಾರರಾಗಿರುವಂತಹ ಟಿಆರ್ ಕೃಷ್ಣಪ್ಪ, ಅವರನ್ನು ಸನ್ಮಾನಿಸಲಾಯಿತು. ಸನ್ಮಾನದ ನಂತರದಲ್ಲಿ ಅವರು ಮಾತನಾಡಿ ತಾವು ಅನುಭವಿಸಿರುವಂತಹ ನೋವುಗಳನ್ನು ಹೇಳಿಕೊಂಡರು….. ಹಾಗೂ “” ನಾಶ ಮಾಡಲಿಕ್ಕೆ ಹೊರಟವರು ಬಹುಮಾನ ಮಾನವೀಯತೆ ಆತ್ಮವಿಲೋಕನ ಎಂದು ಹೇಳುತ್ತಾ “”” ತಮ್ಮ ನೋವುಗಳನ್ನು ತೋಡಿಕೊಂಡರು… ಸದಾ ಯಾವಾಗಲೂ ರಿಪನ್ ಪೇಟೆ ಭಾಗದಲ್ಲಿ ಓಡಾಡುತ್ತಿರುವ ಇವರು ಕೆಲವೇಷ್ಟು ಜನಗಳಿಗೆ ಮಾತ್ರ ಗೊತ್ತಿದ್ದು ಆದರೆ ಇಂಥ ಒಂದು ಅದ್ಭುತವಾದ ಕಾರ್ಯಗಾರದಲ್ಲಿ ಅವರು ತೊಡಗಿಸಿಕೊಂಡಿರುವುದು ಎಲ್ಲರಿಗೂ ಮನ ಮುಟ್ಟಬೇಕು.
ಇದೇ ಸಂದರ್ಭದಲ್ಲಿ,, ವಿಕಸಿತ ಭಾರತ ಕುರಿತು ” ಆರ್ ಟಿ ಗೋಪಾಲ ” ಮಾತನಾಡಿ, ಸ್ವಚ್ಛ ಭಾರತ ಅಭಿಯಾನದ ಕುರಿತು ಸಂಕ್ಷಿಪ್ತವಾದ ವಿವರಣೆಯನ್ನು ನೀಡಿದರು ಅದಕ್ಕೆ ಒಂದು ಉದಾಹರಣೆ ಕೂಡ ನೀಡುತ್ತಾ,, ಇವತ್ತು ಒಂದು ಮಗು ಚಾಕ್ಲೇಟನ್ನು ತೆಗೆದುಕೊಂಡು ತಿನ್ನಲು ಮುಂದಾದಾಗ ಆ ಚಾಕ್ಲೇಟ್ ಸಿಪ್ಪೆಯನ್ನು ಎಲ್ಲಿ ಹಾಕಬಹುದೆಂದು ತಿಳಿದುಕೊಂಡು ತದನಂತರ ತನ್ನ ಜೇಬಿಗೆ ಹಾಕಿಕೊಂಡ ಎಂದು ಕೆಲವಷ್ಟು ಉದಾಹರಣೆಗಳನ್ನು ನೀಡುತ್ತಾ ಹೇಳಿದರು.
ವಿದ್ಯುತ್, ಹಾಗೂ ಸ್ವಚ್ಛ ಭಾರತ ನರೇಂದ್ರ ಮೋದಿ ಸರ್ಕಾರ ನೀಡಿರುವಂತಹ ನೀಡಿರುವಂತಹ ಕೆಲಸಗಳ ಕುರಿತು ವಿಚಾರಗಳನ್ನು ತಿಳಿಸಿದರು ಮನೆ ಮನೆಗೂ ನೀರಿನ ವ್ಯವಸ್ಥೆಯನ್ನು ಮಾಡಿಸಲಾಯಿತು… ಹಾಗೂ ಒಂದು ಸರ್ಜಿಕಲ್ ಸ್ಟ್ರೈಕ್ ನಿಂದ ಇಡೀ ಜಗತ್ತೇ ಬೆಚ್ಚಿ ಬೀಳುವಂತಾಯಿತು ಎಂದು ಹೆಮ್ಮೆಯಿಂದ ಹೇಳಿಕೊಂಡರು..
ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾಗಿರುವಂತಹ ಶ್ರೀಯುತ ಜಗದೀಶ್ ರವರು ಕೂಡ ಮಾತನಾಡಿ ಅಂದಿನ ಕರಾಳ ದಿನದ ಸಂಕ್ಷಿಪ್ತವಾದ ವಿವರಣೆಯನ್ನು ನೀಡಿ… ಸಾವು ನೋವಿನೊಂದಿಗೆ ಜನರು ಅನುಭವಿಸಿರುವಂತಹ ನೋವು ವಿವರಣೆಯನ್ನು ನೀಡಿದರು..
ರಿಪ್ಪನ್ ಪೇಟೆಯ ಬೂತ್ ಅಧ್ಯಕ್ಷರಾದ ” ಶ್ರೀಯುತ ಸತೀಶ್ ” ಇವರು ಕೂಡ ಈ ಒಂದು ಸಂದರ್ಭದಲ್ಲಿ ಮಾತನಾಡಿ ತಮ್ಮ ನಾಲ್ಕು ನುಡಿಗಳಲ್ಲಿ ಮಾಹಿತಿಯನ್ನು ನೀಡಿದ್ದಾರೆ..
ಹೊಸನಗರ ತಾಲೂಕು ಅಧ್ಯಕ್ಷ ರಾಗಿರುವಂತಹ ” ಸುಬ್ಬಣ್ಣ ಮತ್ತಿಮನೆ ” ಇವರು ಕೂಡ ಹಾಜರಿದ್ದರು.
ಪಕ್ಷದ ಎಲ್ಲಾ ಕಾರ್ಯಕರ್ತರು ಕೂಡ ಹಾಜರಿದ್ದರು.
ರಿಪ್ಪನ್ ಪೇಟೆ ಭಾಗದ ಎಲ್ಲಾ ಕಾರ್ಯಕರ್ತರು ಹಾಗೂ ಮಹಿಳಾ ಮುಖಂಡರು.. ಮಹಿಳಾ ಕಾರ್ಯಕರ್ತರು ಬೂತ್ ಕಮಿಟಿಯ ಎಲ್ಲಾ ಮುಖಂಡರು ಸಂಚಾಲಕರು ಎಲ್ಲಾ ಕಾರ್ಯಕರ್ತರು ಹಾಜರಿದ್ದರು. ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಾಯಿತು..