ಓರ್ವ ರೈತನಿಗೆ ತಹಶೀಲ್ದಾರರಿಂದ ಅನ್ಯಾಯ,?
ವಸವೆ ಗ್ರಾಮ, ಮೇಲಿನ ಬೆಸುಗೆ ಗ್ರಾಮ ಪಂಚಾಯಿತಿ ಹುಂಚ ಹೋಬಳಿ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ.
ವಸವೆ ಗ್ರಾಮದಲ್ಲಿ ವಾಸವಾಗಿರುವಂತಹ ಶ್ರೀಧರ್ ಎಂಬ ರೈತ ಕುಟುಂಬಕ್ಕೆ ಅನ್ಯಾಯ ಆಗಿರುವ ಬಗ್ಗೆ ಏನಿದು ವಿಚಾರ?
ಸುಮಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿರುವಂತಹ ಶ್ರೀಧರ್ ಕುಟುಂಬ ಇದೀಗ ತಹಶೀಲ್ದಾರ್ ಆಫೀಸ್ ಎದುರುಗಡೆ ನೆನ್ನೆಯಿಂದ ಉಪವಾಸ ಸತ್ಯಾಗ್ರಹ ಹಲವಾರು ರೈತರು ಸೇರಿ ಮಾಡುತ್ತಿದ್ದು ಇದಕ್ಕೆ ನ್ಯಾಯ ಸಿಗಬೇಕೆಂದು ಎಲ್ಲರೂ ಕೂಡ ಧರಣಿಯಲ್ಲಿ ಕುಳಿತಿದ್ದಾರೆ ಹಾಗಾದರೆ ಏನಿದು ವಿಚಾರ?
ದಿನಾಂಕ 28 5 2025 ರಂದು ತಹಶೀಲ್ದಾರ್ ಅವರು ಏಕಾಏಕಿ ಯಾವುದೇ ನೋಟಿಸ್ ಕೊಡದೆ ಸುಮಾರು ಎಂಟು ಹತ್ತು ವರ್ಷಗಳಿಂದ ಅಡಿಕೆ ಗಿಡಗಳನ್ನು ನೆಟ್ಟಿದ್ದು ಇದೀಗ ಫಲ ಬರುವ ಸಮಯದಲ್ಲಿ ಏಕಾಏಕಿ ಬಂದು ಗಿಡಗಳನ್ನು ಕಡಿದು ನಾಶ ಮಾಡಿದ್ದಾರೆ ಹಾಗೂ ಅವರ ಮನೆಯಲ್ಲಿರುವಂತಹ ರೈತನ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಶ್ರೀಧರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ? ಏಕಾಏಕಿ ಅಡಿಕೆ ಗಿಡಗಳನ್ನು ಕಡಿಸಲು ಕಾರಣವೇನು?
ತದನಂತರದಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಆಗಿದ್ದು, ಯಾವುದೇ ಡಿಸಿ ಕೋರ್ಟಿನಿಂದ ತೀರ್ಮಾನ ಆಗಿಲ್ಲ ಏಕಾಏಕಿ ಬಂದು ಜೆಸಿಪಿಯನ್ನು ತೆಗೆದುಕೊಂಡು ಬಂದು ಗಿಡಗಳನ್ನು ಸರ್ವನಾಶ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾರೆ… ಯಾರು ಅರ್ಜಿ ಕೊಟ್ಟಿದ್ದಾರೆ ಅವರದು ಕೂಡ ಒತ್ತುವರಿ ಜಾಗ ಇದೆ ಎಂದು ರೈತ ಹೇಳಿಕೊಂಡಿದ್ದಾರೆ
ಮನೆಯಲ್ಲಿರುವಂತಹ ಕಳೆ ಹೊಡೆಯುವ ಮಷೀನ್ ಟೈಲರಿಂಗ್ ಮಷೀನ್ ಇನ್ನು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರೈತರ ಆರೋಪಿಸಿದ್ದಾರೆ.
ಸುಮಾರು 1600 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾರೆ ಹಾಗಾದರೆ ನಮ್ಮಂತ ರೈತರಿಗೆ ನ್ಯಾಯ ಇಲ್ಲವೇ ಇದೇನಿದು ದೌರ್ಜನ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ?
ನೆನ್ನೆಯಿಂದ ಇದಕ್ಕೆ ಸಂಬಂಧಪಟ್ಟ ಯಾವ ಅಧಿಕಾರಿಗಳು ಬಂದಿಲ್ಲ… ಇದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕೂಡ ಈಗ ಏನು ಮಾತನಾಡದೆ ಅವರ ಪಾಡಿಗೆ ಅವರ ಕೆಲಸ ಮಾಡಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ?
ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಬೇಕು.
ರೈತರಿಗೆ ಆಗಿರುವ ನಷ್ಟದ ಬಗ್ಗೆ ನ್ಯಾಯ ಕೊಡಿಸಬೇಕೆಂದು ರೈತರು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ…. ಇನ್ನು ಕೂಡ ಯಾವುದೇ ರೀತಿಯ ಅಧಿಕಾರಿಗಳಿಂದ ಯಾವುದೇ ಉತ್ತರ ದೊರಕಿಲ್ಲ ಎಂದು ರೈತ ಆರೋಪಿಸಿದ್ದಾರೆ?