
26ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತವಾಗಿ ರಿಪ್ಪನ್ ಪೇಟೆಯ ನಮ್ಮ ಶಾಪಲ್ಲಿ ” ನ್ಯೂ ಶ್ವೇತ ಶ್ರೀ ಗಾರ್ಮೆಂಟ್ಸ್ ” ತಮ್ಮ ಜೀವವನ್ನು ತ್ಯಾಗ ಮಾಡಿರುವ ಯೋಧರಿಗೆ ದೀಪ ಹಚ್ಚುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದೆವು.
ಕಾರ್ಗಿಲ್ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವ ದಿನ. ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತ ವೀರ ಯೋಧರು ಸದೆ ಪಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನ ಇದಾಗಿದೆ. ಇದರ ನೆನಪಿಗಾಗಿ ಭಾರತದಲ್ಲಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ ದಿನವಾಗಿ ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ ದಿನದಂದು ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಗುತ್ತದೆ ಹಾಗೂ ಈ ದಿನವನ್ನು ವಿಶೇಷವಾಗಿ ಕಾರ್ಗಿಲ್ ವಿಜಯೋತ್ಸವ ಎಂದು ಪರಿಗಣಿಸಿ , ದೇಶದದ್ಯಂತ ಈ ದಿನವನ್ನು ನೆನಪಿಗಾಗಿ ಆಚರಿಸಲಾಗುತ್ತದೆ. ಈ ಒಂದು ಸಂದರ್ಭದಲ್ಲಿ ಡಾ. ಶ್ವೇತಾ ಜಿ ಎನ್ ಆಚಾರ್ಯ, ಹಾಗೂ ಶಾಪಿನ ಸಿಬ್ಬಂದಿ ವರ್ಗದವರು ಹಾಜರಿದ್ದರು..