
ಅರಣ್ಯಾಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.
ಅರಣ್ ಅಧಿಕಾರಿಗಳು ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ *ಹರತಾಳು ಹಾಲಪ್ಪ ವ್ಯಕ್ತಪಡಿಸಿದ್ದಾರೆ
ಇಷ್ಟು ಗೋರ ಮಳೆಗಾಲ ಕಾರ್ಗತ್ತಲು ಮಳೆಯಲ್ಲಿ ಇಂತಹ ಮಳೆಯಲ್ಲಿ ಬಡಜನರು ಸೀಟುಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು
ಈ ಗೋರ ಮಳೆಗಾಲದಲ್ಲಿ ಜನರು ಎಲ್ಲಿ ಹೋಗಬೇಕು ಮೊನ್ನೆ ಅರಳಿ ಕೊಪ್ಪದಲ್ಲಿ ಶೀಟುಗಳನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದ ಕುಟುಂಬದವರ ಮೇಲೆ ಕೇಸು ಹಾಕಿ ಆ ಶೀಟುಗಳನ್ನು ತೆಗೆದುಕೊಂಡು ಬಂದಿದ್ದಾರೆ ಈ ಮಳೆಗಾಲದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದ್ದು ಇಂತಹ ಒಂದು ಕೃತ್ಯಕ್ಕೆ ಅರಣ್ಯ ಅಧಿಕಾರಿಗಳು ಮಾನವೀಯತೆಯನ್ನು ಮರೆತಿದ್ದಾರೆಯೇ? ಎಂದು ಆಗಿರುವ ಘಟನೆಯನ್ನು ವಿವರಿಸುತ್ತಾ ಮಾನವೀಯತೆಯಿಂದ ಕಾನೂನು ಪ್ರಕಾರದಲ್ಲಿ ಸರಿಯೋ ತಪ್ಪೋ ಗೊತ್ತಿಲ್ಲ? ಕಾನೂನಿಗಾಗಿ ಬದುಕುವುದು ಅಲ್ಲ ಬದುಕುವುದಕ್ಕಾಗಿ ಕಾನೂನು ಇರುವುದು* ಹಾಗಾದರೆ ನೊಂದವರು ಮಳೆಗಾಲದಲ್ಲಿ ಎಲ್ಲಿ ಹೋಗಬೇಕು ಅನ್ನೋದು ಪ್ರಶ್ನೆ?
ಇದು ಗೋರಾ ಅನ್ಯಾಯ ಈ ವಿಚಾರವಾಗಿ ನಾವು ಮೇಲಾಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದಾರೆ. ಒಂದು ಕುಟುಂಬದಲ್ಲಿ ವಯಸ್ಸಾದ ತಂದೆ ತಾಯಿ ಮಕ್ಕಳು ಎಲ್ಲರೂ ಕೂಡ ಒಟ್ಟಿಗೆ ಜೀವನ ನಡೆಸುತ್ತಿದ್ದು ಹೀಗೆ ಆ ಶರ್ಟ್ ನಲ್ಲಿ ವಾಸವಾಗಿರುವರನ್ನ ಏಕಾಏಕಿ ಕಿತ್ತು ತಂದರೆ ಅವರು ಈ ಮಳೆಗಾಲದ ದಿನದಲ್ಲಿ ಎಲ್ಲಿ ವಾಸವಾಗಬೇಕು ಎಂದು ವ್ಯಕ್ತಪಡಿಸಿದರು?
ಹೀಗೆ ಮತ್ತೊಮ್ಮೆ ಮಾಡಿದರೆ ನಾವು ತಡೆಯುತ್ತೇವೆ . ರೈತರ ಪರ ಪಕ್ಷವೂ ನಿಲ್ಲುತ್ತದೆ ಹಾಗೆ ರೈತರ ಸಂಘಗಳ ಸಹಕಾರ ರಕ್ಷಣೆಗೂ ನಿಲ್ಲುತ್ತದೆ ಎಂದು
ಬಿಜೆಪಿ: ಎಚ್ ಹಾಲಪ್ಪ ಮಾಜಿ ಸಚಿವರು
ಉಪಾಧ್ಯಕ್ಷರು ರಾಜ್ಯ ಬಿಜೆಪಿ ಕರ್ನಾಟಕ