ರಾಷ್ಟ್ರೀಯ ಅಹಿಂದ ಸಂಘಟನೆಯ ರೈತ ಮೋರ್ಚ ಶಿವಮೊಗ್ಗ ಅಧ್ಯಕ್ಷರಾಗಿ ಜಯರಾಮ್ ಶೆಟ್ಟಿ ಆಯ್ಕೆ

ಮಲೆಗಳ ನಾಡು ಶಿವಮೊಗ್ಗ.

ಆ ಶಿವಮೊಗ್ಗದ ಹೆಬ್ಬಾಗಿಲು ಹೊಸನಗರ, ದಟ್ಟವಾದ ಕಾಡು ಅನೇಕ ಜೀವರಾಶಿ ಸಂಕುಲ ಸ್ವರ್ಗದಂತ ಕಾಣುವ ಭೂಪ್ರದೇಶ ನೋಡುಗರ ಕಣ್ಮನ ಸೆಳೆಯುತ್ತದೆ.

ಆದರೆ ಈ ಪ್ರದೇಶದಲ್ಲಿ ವಾಸಿಸುವವರ ಜೀವನ ಮಾತ್ರ ಅಸ್ತವ್ಯಸ್ತ. ಕೆಸರು ಮತ್ತು ಗುಂಡಿಗಳಿಂದ ತುಂಬಿದ ರಸ್ತೆ ಮಳೆಗಾಲದಲ್ಲಿ ಬರುವ ಅತಿಯಾದ ಮಳೆ, ಹೋದರೆ ವಾರಗಟ್ಟಲೆ ಬರದಂತಹ ವಿದ್ಯುತ್, ಮೊಬೈಲ್ ನೆಟ್ವರ್ಕ್ ಗಾಗಿ ಅಲೆಯ ಬೇಕಾದಂತಹ ಪರಿಸ್ಥಿತಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಶಾಲೆ ಮಕ್ಕಳಿಗೆ ಆಗುವಂತಹ, ಸಮಸ್ಯೆಗಳಿದ್ದರೂ  ತಲೆ ಕೆಡಿಸಿಕೊಳ್ಳದ ಅಂತಹ ಸರ್ಕಾರ. ರೈತರ ಭೂಮಿಯನ್ನು ಒಕ್ಕಲಿಬ್ಬಿಸುವ ಕೆಲಸದಲ್ಲಿ ತೊಡಗಿಕೊಂಡಿದೆ .

 ಮಲೆನಾಡಿನ ಕೆಲ ರೈತರು ಫಾರಂ ನಂಬರ್  53 – 57ರಲ್ಲಿ ಅರ್ಜಿ ಸಲ್ಲಿಸಿದ್ದರು ಕೂಡ ಇನ್ನೂ ಸಿಗದ ಹಕ್ಕುಪತ್ರ ಇಂತಹ ಸಮಸ್ಯೆಗಳಿದ್ದರೂ ತಲೆಕೆಡಿಸಿಕೊಳ್ಳದ ಸರ್ಕಾರ.ಗೋಮಾಳದ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಒಕ್ಕಲಬ್ಬಿಸುವಂತಹ  ಕೆಲಸ  ನಡೆಯುತ್ತಿದೆ ಈ ಹಿಂದೆ ಓರ್ವ ರೈತರು ಅಡಿಕೆ ತೋಟವನ್ನು ನೋಟಿಸ್ ನೀಡದೆ 1600 ಎಂಟು ವರ್ಷದ ಅಡಿಕೆ ಮರಗಳನ್ನು ಕಡಿದಂತಹ ತಹಶೀಲ್ದಾರರ ವಿರುದ್ಧ ಜಯರಾಮ  ಶೆಟ್ಟಿ.ಹಾಗೂ ಸಾಮಾಜಿಕ ಹೋರಾಟಗಾರ ಕೆರೆಹಳ್ಳಿ ಅಂಜನ್, ಮತ್ತು ಇನ್ನಿತರ ರೈತರು ಸೇರಿ ತಹಸಿಲ್ದಾರರ ಕಚೇರಿ ಎದುರು ಮೂರು ದಿನದ ಕಠಿಣ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದನ್ನು. ಗಮನಿಸಿದ ರಾಷ್ಟ್ರೀಯ ಅಹಿಂದ ಸಂಘಟನೆಯ* ರಾಜ್ಯ ಅಧ್ಯಕ್ಷರಾದ  ಶ್ರೀಯುತ  ಮುತ್ತಣ್ಣ ಶಿವಳ್ಳಿ ಅವರು ಜಯರಾಮ್ ಶೆಟ್ಟಿ ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆಯ ರೈತ ಮೋರ್ಚ ಶಿವಮೊಗ್ಗ ಸಂಘಟನೆಯ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುತ್ತಾರೆ.

ಜಯರಾಮ್ ಶೆಟ್ಟಿ ಅವರು ಇದಲ್ಲದೆ ಈ ಹಿಂದೆ ಕೂಡ ರೈತರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಅದಲ್ಲದೆ ಸರ್ವ ಧರ್ಮ ಸೌಹಾರ್ದಿತ ಟ್ರಸ್ಟ್  ಸ್ಥಾಪಿಸಿ ಆ ಮೂಲಕ ಅನೇಕ ಬಡವರಿಗೆ ಮತ್ತು ನಿರ್ಗತಕರಿಗೆ ಸಹಾಯ ಮಾಡಿದ್ದಲ್ಲದೆ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆ, ಅಂಗವಿಕಲರಿಗೆ ಸಹಾಯಧನ ಹಾಗೂ ಕ್ಯಾನ್ಸರ್ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಹಾಗೂ ಸಂಸ್ಕೃತಿಕ ಎಷ್ಟೋ   ವೇದಿಕೆಗಳಲ್ಲಿ ಸಹಕರಿಸಿ ಇನ್ನು ಎಷ್ಟೋ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಗೂ ತಮ್ಮ ಕೈಯಲ್ಲಾದ  ಸಹಾಯವನ್ನು ಮಾಡಿಕೊಂಡು ಬಂದಿರುತ್ತಾರೆ ಇಂತಹ ಒಬ್ಬ ವ್ಯಕ್ತಿಯನ್ನು ಗುರುತಿಸಿ ಶಿವಮೊಗ್ಗ ಜಿಲ್ಲೆಯ ಅಹಿಂದ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದ್ದು ಜಯರಾಮ್ ಶೆಟ್ಟಿ ಅವರ ಕಾರ್ಯ ಹೊಸನಗರ ತಾಲೂಕಿನ ಜನತೆಗೆ ಹೆಮ್ಮೆಯ ವಿಚಾರವಾಗಿದ್ದು ಹೀಗೆ ರೈತರಿಗೆ ಬೆಂಬಲವಾಗಿ ನಿಲ್ಲಲಿ ಎಂದು ಆಶಿಸುತ್ತಾ ಜಿಲ್ಲಾ ಅಹಿಂದ ಸಂಘಟನೆಯ ಅಧ್ಯಕ್ಷರನ್ನಾಗಿ ಆಯ್ಕೆ ಆಗಿರುವಂತಹ ಜಯರಾಮ್ ಶೆಟ್ಟಿ ಅವರಿಗೆ ರೈತ ಸಂಘಟನೆಯ ಎಲ್ಲರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ

 ನಮ್ಮ ಸುದ್ದಿ ಮಾಧ್ಯಮದ್ಯಮದಿಂದಲೂ ಕೂಡ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಶ್ರೀ ಯಕ್ಷಣಿ ಸ್ವ   ಉದ್ಯೋಗ ತರಬೇತಿ ಸಂಸ್ಥೆ. ಹಾಗೂ ನ್ಯೂ ಶ್ವೇತ ಶ್ರೀ ಗಾರ್ಮೆಂಟ್ಸ್ ಇವರು ಹಾಗೂ ಸಿಬ್ಬಂದಿ ವರ್ಗದವರ ಪರವಾಗಿ ಇವರಿಗೆ ಅಭಿನಂದನೆಯನ್ನು ಕೂಡ ಸಲ್ಲಿಸುತ್ತೇವೆ.

 

 

 

 

 

 

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

     ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ , ಹೊಸನಗರ ತಾಲೂಕು. ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ವಾಲಿಬಾಲ್ ಪಂದ್ಯಾವಳಿಯನ್ನು  3 ಜನವರಿ 2026 ತಳಲೆ ಗ್ರಾಮದಲ್ಲಿ ನಡೆಸಲಾಗುತ್ತಿದೆ. ವಾಲಿಬಾಲ್ ಪಂದ್ಯಾವಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೇಯಸ್…

    Continue reading
    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಬೃಹತ್ ಪ್ರತಿಭಟನೆ  ಜಾಗರಣಾ ವೇದಿಕೆ, ವಿನಾಯಕ ಪೇಟೆ  ( ರಿಪ್ಪನ್ ಪೇಟೆ)  ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂದುಗಳ ನರಮೇದವನ್ನು ಖಂಡಿಸಿ ಹಾಗೂ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಹಿಂದೂ ಜಾಗರಣ ವೇದಿಕೆ ರಿಪ್ಪನ್ ಪೇಟೆ ಇವರು ಹಿಂದುಗಳ ರಕ್ಷಣೆಗೆ ಆಗ್ರಹಿಸಿ…

    Continue reading

    You Missed

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ  ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ವಿನಾಯಕ ಪೇಟೆ (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ವಿನಾಯಕ ಪೇಟೆ  (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ