
ರಾಜ್ಯ ಅಹಿಂದ ಸಂಘಟನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಜಯರಾಮ ಶೆಟ್ಟಿ ಇವರ ನೇತೃತ್ವದಲ್ಲಿ ಹಣದ ವ್ಯವಹಾರದಲ್ಲಿ ಮೋಸ ಹೋಗಿದ್ದ ಯುವಕನಿಗೆ ನ್ಯಾಯ ದೊರಕಿಸಿ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಓರ್ವ ಯುವಕನಿಗೆ ಆತನ ಸ್ನೇಹಿತನಿಂದ ಮೋಸ ಹೋಗಿದ್ದು ಹಣವನ್ನು ಈತನ ಅಕೌಂಟಿಗೆ ಹಾಕಿದ್ದು ಈ ಯುವಕನು ಸತತವಾಗಿ ಎರಡೂವರೆ ತಿಂಗಳ ಗಳಿಂದ ಸಾಗರದ ಪೊಲೀಸ್ ಠಾಣೆಗೆ ಓಡಾಡುತ್ತಿದ್ದು ಈ ವಿಚಾರವೂ ಜಯರಾಮ ಶೆಟ್ಟಿ ಅವರ ಗಮನಕ್ಕೆ ಬಂದು ನ್ಯಾಯದ ಪರ ಹೋರಾಡಲು ಮುಂದಾಗಿರುತ್ತಾರೆ
ಅಕುೌಂಟಿಗೆ ಹಣವನ್ನು ಹಾಕಿರುವ ವ್ಯಕ್ತಿಯು ಬೆಂಗಳೂರಿನ ನಿವಾಸಿಯಾಗಿದ್ದು ಆ ವ್ಯಕ್ತಿಯು ಅಲ್ಲಿ ಪೀಣ್ಯ ಸೆಕೆಂಡ್ ಸ್ಟೇಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಹುಡುಗನ ಅಕೌಂಟನ್ನು ಬ್ಲಾಕ್ ಮಾಡಲಾಗಿತ್ತು ಹಣವನ್ನು ಆ ವ್ಯಕ್ತಿಯ ಅಕೌಂಟಿಗೆ ವಾಪಸ್ ಹಾಕಿದ್ದರೂ ಕೂಡ ಪೀಣ್ಯ ಪೊಲೀಸ್ ಠಾಣೆಯಲ್ಲಿ ಆ ಹುಡುಗನ ಅಕೌಂಟ್ ಬ್ಲಾಕ್ ಯಿಂದ ತೆಗೆಯಲಿಲ್ಲ ನಂತರದಲ್ಲಿ ಆ ಪೊಲೀಸ್ ಠಾಣೆಗೆ ಭೇಟಿಯನ್ನು ನೀಡಿದ್ದು ಅಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಅಕೌಂಟನ್ನು ಬ್ಲಾಕ್ ಇಂದ ತೆಗೆಯುವುದಾಗಿ ತಿಳಿಸಿರುತ್ತಾರೆ.
ಹೀಗೆ ಎಷ್ಟೋ ಜನರಿಗೆ ನ್ಯಾಯ ಕೊಡಿಸುವುದಾಗಿ ಅಹಿಂದ ಸಂಘಟನೆಯ ಜಿಲ್ಲೆಯ ಅಧ್ಯಕ್ಷರಾಗಿರುವ ಜಯರಾಮ ಶೆಟ್ಟಿ ಸತತವಾಗಿ ಸತ್ಯದ ಪರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು ಈ ಹುಡುಗನ ವಿಷಯದಲ್ಲಿಯೂ ಕೂಡ ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಹಾಗೂ ಆ ಹುಡುಗನಿಗೆ ನ್ಯಾಯವನ್ನು ದೊರಕಿಸಿ ಕೊಟ್ಟಿದ್ದಾರೆ.