ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ:-

ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೀಡು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಾಲ್ಕು ಬಾರಿ ಪಲ್ಟಿಯಾದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಸುಗುಂಡಿ ಗ್ರಾಮದ ಗಿರಿಜಮ್ಮ (60), ದರ್ಶನ್ (22) ಹಾಗೂ ಹರ್ಷಿತಾ (22) ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಿರಿಜಮ್ಮ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಚಾಲಕ ದರ್ಶನ್ ಅವರ ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಹರ್ಷಿತಾ ಅವರ ಸೊಂಟ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಅಪಘಾತದ ಬಳಿಕ ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ರಿಪ್ಪನ್‌ಪೇಟೆ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಯಿತು.

ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

    ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ ಆನಂದಪುರ, ಜು.13: ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿರುವ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ, ಕಾಡಿನ ಮಧ್ಯೆ ನಡೆಯುತ್ತಿದ್ದ ಅಕ್ರಮ ತೂರಬಿಲ್ಲೆ ಜೂಜಾಟದ ಮೇಲೆ…

    Continue reading
    ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

    ಭಾರತೀಯ ಜನತಾ ಪಕ್ಷ, ಹೊಸನಗರ ಮಂಡಲ ಬಿಜೆಪಿ ರೈತ ಮೋರ್ಚಾ ವತಿಯಿಂದ ಸವಯವ ಕೃಷಿ ಹಾಗೂ ಅಡಿಕೆ ಬೆಳೆ ಎಲೆಚುಕ್ಕಿ–ಕೊಳೆರೋಗ ನಿಯಂತ್ರಣ ಕುರಿತು ಯಶಸ್ವಿ ರೈತ ಕಾರ್ಯಾಗಾರ. Bharatiya Janata Party, Hosanagara mandali BJP Kisan Morcha Organizes Successful…

    Continue reading

    You Missed

    ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ:-

    ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ:-

    ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

    ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

    ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

    ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

    ಹೊಸನಗರ ಪಟಗುಪ್ಪ : ಸೇತುವೆ ಬಳಿ ಗೋವು ಹತ್ಯಪ್ರಕರಣ

    ಹೊಸನಗರ ಪಟಗುಪ್ಪ : ಸೇತುವೆ ಬಳಿ ಗೋವು ಹತ್ಯಪ್ರಕರಣ

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ

    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ