ವಿಶ್ವಕರ್ಮ ಸಮುದಾಯದ ಉಪಾಕರ್ಮ ಕಾರ್ಯಕ್ರಮ
ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಆಯೋಜಿಸಲಾದ ಉಪಾಕರ್ಮ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ನೆರವೇರಿತು. ವೇದ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉಪಾಕರ್ಮವು ಆತ್ಮಶುದ್ಧಿ, ವೇದಾಧ್ಯಯನದ ಪುನರ್‌ಆರಂಭ ಹಾಗೂ ಧಾರ್ಮಿಕ ಸಂಸ್ಕಾರವನ್ನು ಸ್ಮರಿಸುವ ಪವಿತ್ರ ಆಚರಣೆಯಾಗಿದೆ.

ವಿಶ್ವಕರ್ಮ ಸಮುದಾಯದ ಸದಸ್ಯರು ಒಗ್ಗಟ್ಟಾಗಿ ಭಾಗವಹಿಸಿ, ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ತಾಲೂಕು ಅಧ್ಯಕ್ಷರಾದ ಸಂತೋಷ್ ಆಚಾರ್ ಹಾಗೂ ದೇವದಾಸ್ ಆಚಾರ್, ರಿಪ್ಪನಪೇಟೆ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.






