ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

ಆನಂದಪುರ, ಜು.13: ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿರುವ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ, ಕಾಡಿನ ಮಧ್ಯೆ ನಡೆಯುತ್ತಿದ್ದ ಅಕ್ರಮ ತೂರಬಿಲ್ಲೆ ಜೂಜಾಟದ ಮೇಲೆ ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದೆ.

ಜುಲೈ 12ರಂದು ಮಧ್ಯಾಹ್ನ, ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳಿನ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಯಾವುದೇ ಅನುಮತಿಯಿಲ್ಲದೆ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ, ಸ್ಥಳದಲ್ಲಿದ್ದ ಕೆಲವರು ಪರಾರಿಯಾಗಿದ್ದು, ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರಿಂದ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹4,200 ನಗದು ಹಾಗೂ ₹1 ಮುಖಬೆಲೆಯ ಎರಡು ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಸಂತೋಷ್ (ಆನಂದ ಪುತ್ರ), ಶಿವು (ನಾಗರಾಜ ಪುತ್ರ) ಹಾಗೂ ಶಾಬಾಷ್ (ಭಾಷಾಸಾಬ್ ಪುತ್ರ) ಎಂದು ಗುರುತಿಸಲಾಗಿದೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ವಿಶ್ವಕರ್ಮ ಸಮುದಾಯದ ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಆಯೋಜಿಸಲಾದ ಉಪಾಕರ್ಮ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ನೆರವೇರಿತು. ವೇದ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉಪಾಕರ್ಮವು ಆತ್ಮಶುದ್ಧಿ, ವೇದಾಧ್ಯಯನದ ಪುನರ್‌ಆರಂಭ ಹಾಗೂ ಧಾರ್ಮಿಕ ಸಂಸ್ಕಾರವನ್ನು ಸ್ಮರಿಸುವ ಪವಿತ್ರ…

    Continue reading
    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    You Missed

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.