ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

ರಿಪ್ಪನ್‌ಪೇಟೆ: ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವಿರುದ್ಧ ಕೇಳಿಬಂದಿರುವ ಲೇಬರ್ ಕಾರ್ಡ್‌ಗಾಗಿ ಹೆಚ್ಚುವರಿ ಹಣ ವಸೂಲಿ ಹಾಗೂ ಇತರ ಆರೋಪಗಳು ನಿರಾಧಾರ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಸಂಘವು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ಸಂಜಯ್ ಅವರು ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು, ಸಂಘವು ಯಾವುದೇ ತನಿಖೆಗೂ ಸಿದ್ಧವಿದೆ ಎಂದು ಹೇಳಿದರು. ತಾಲೂಕು ಗ್ರಾಮಾಂತರ ಅಧ್ಯಕ್ಷ ಮಹಮ್ಮದ್ ಹುಸೇನ್ ಕೂಡ ಆರೋಪಗಳನ್ನು ತಳ್ಳಿಹಾಕಿ, ಈ ಹಿಂದೆ ಸಂಘದ ಸಭೆಗಳಲ್ಲಿ ಏಕೆ ವಿಷಯ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟ ಕೋಡೂರು ಶಾಖವಳ್ಳಿ ಗ್ರಾಮದ ಸುಮಾ ಅವರ ಕುಟುಂಬಕ್ಕೆ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ರಾಜುರೆಡ್ಡಿ ಅವರು ಮೃತರ ಪತಿಗೆ ಧನಸಹಾಯ ವಿತರಿಸಿದರು.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ವಿಶ್ವಕರ್ಮ ಸಮುದಾಯದ ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಆಯೋಜಿಸಲಾದ ಉಪಾಕರ್ಮ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ನೆರವೇರಿತು. ವೇದ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉಪಾಕರ್ಮವು ಆತ್ಮಶುದ್ಧಿ, ವೇದಾಧ್ಯಯನದ ಪುನರ್‌ಆರಂಭ ಹಾಗೂ ಧಾರ್ಮಿಕ ಸಂಸ್ಕಾರವನ್ನು ಸ್ಮರಿಸುವ ಪವಿತ್ರ…

    Continue reading
    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    You Missed

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.