ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಜಿಲ್ಲಾ ವಿಶ್ವ ಬ್ರಾಹ್ಮಣ ಸಂಘದ ವತಿಯಿಂದ ಅದ್ದೂರಿ ಆಚರಣೆ.

ಜಿಲ್ಲಾ ವಿಶ್ವ ಬ್ರಾಹ್ಮಣ ಮಹಿಳಾ ಸಂಘ ಕೃಷಿ ನಗರ ಶಿವಮೊಗ್ಗ ಇವರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು 

ಜಿಲ್ಲಾ ವಿಶ್ವ ಬ್ರಾಹ್ಮಣ ಮಹಿಳಾ ಸಂಘವು ಸತತವಾಗಿ ಸುಮಾರು ವರ್ಷಗಳಿಂದ ಶ್ರೀಮತಿ ರೂಪ ಚಂದ್ರಶೇಖರ್ ಇವರ ನೇತೃತ್ವದಲ್ಲಿ ನಡೆಸಿಕೊಂಡು ಬಂದಿದ್ದು ಇವರು ಸಮಾಜದಲ್ಲಿ ಮಹಿಳೆಯರ ಬಗ್ಗೆ ಅತ್ಯಂತ ಕಾಳಜಿಯನ್ನು ವಹಿಸಿದ್ದು ಮಹಿಳೆಯರನ್ನು ಜೋಡಿಸಿಕೊಂಡು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿವಮೊಗ್ಗ ಭಾಗದಲ್ಲಿ ಗುರುತಿಸಿಕೊಂಡ ಇವರು ಈ ದಿನ ಅತ್ಯುತ್ತಮ ಕಾರ್ಯಕ್ರಮವನ್ನು ಮಹಿಳಾ ದಿನಾಚರಣೆಯ ಪರವಾಗಿ ಆಯೋಜಿಸಿದ್ದರು, ಇವರ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀಮತಿ ಗೀತಾ ಸುರೇಶ್ ಕೂಡ ಭಾಗಿಯಾಗಿರುತ್ತಾರೆ ಹಾಗೂ ಇವರು ರೂಪ ಚಂದ್ರಶೇಖರ್ ಇವರೊಂದಿಗೆ ಅತ್ಯಂತ ಸುಂದರವಾದ ಒಡನಾಟವನ್ನು ಹೊಂದಿದ್ದು ವಿಶ್ವಕರ್ಮ ಸಂಘಟನೆಯ ಇಬ್ಬರು ಕೂಡ ಒಂದು ನೇಗಿಲಿಗೆ ಎರಡು ಎತ್ತುಗಳಂತೆ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ..

 

ಈ ಸಂದರ್ಭದಲ್ಲಿ ಆಗಮಿಸಿರುವ ಸರಕಾರಿ ಹುದ್ದೆಯಲ್ಲಿರುವ ಹಾಗೂ ಸ್ವಂತ ತಮ್ಮದೇ ಆಗಿರುವ ಸ್ವಉದ್ಯೋಗವನ್ನು ಮಾಡಿಕೊಂಡಿರುವ ಮಹಿಳೆಯರು ಹಾಗೂ ಮನೆಯಲ್ಲಿ ಕೂತು ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಂದ ಒಂದಿಷ್ಟು ವಿಚಾರಗಳನ್ನು ಒಬ್ಬೊಬ್ಬರು ತಿಳಿಸಿದ್ದರೂ.

ಮಹಿಳೆಯು ಸಮಾಜದಲ್ಲಿ ಎಲ್ಲರೊಡನೆ ಭಾಗಿಯಾಗುವುದು ಅತ್ಯಂತ ಮುಖ್ಯ. ಅವಳು ಕುಟುಂಬ, ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ.

ಮಹಿಳೆಯರು ಸಮಾಜದಲ್ಲಿ ಭಾಗಿಯಾಗಲು ಕೆಲವು ಮಾರ್ಗಗಳು:

– *ಶಿಕ್ಷಣ ಮತ್ತು ಅಭಿವೃದ್ಧಿ*: ಮಹಿಳೆಯರು ಶಿಕ್ಷಣ ಪಡೆದು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.

– *ಸಾಮಾಜಿಕ ಚಟುವಟಿಕೆಗಳು*: ಮಹಿಳೆಯರು ಸಮಾಜ ಸೇವಾ ಸಂಸ್ಥೆಗಳು, ಕ್ಲಬ್‌ಗಳು ಮತ್ತು ಸಂಘಗಳಲ್ಲಿ ಭಾಗವಹಿಸಬೇಕು.

– *ರಾಜಕೀಯ ಭಾಗವಹಿಸುವಿಕೆ*: ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.

– *ಉದ್ಯೋಗ ಮತ್ತು ಉದ್ಯಮಶೀಲತೆ*: ಮಹಿಳೆಯರು ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸ್ವತಂತ್ರರಾಗಬೇಕು.

ಮಹಿಳೆಯರು ಸಮಾಜದಲ್ಲಿ ಭಾಗಿಯಾಗುವುದರಿಂದ:

– ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪನೆಯಾಗುತ್ತದೆ.

– ಮಹಿಳೆಯರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೆಚ್ಚಾಗುತ್ತದೆ.

– ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಈ ಸಂಘದ ಪ್ರತಿಯೊಬ್ಬ ಮಹಿಳೆಯು ಒಂದೊಂದು ವಿಚಾರವಾಗಿ ವಿಶ್ಲೇಷಣೆಯನ್ನು ನೀಡಿದರು.

 

 

 

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ವಿಶ್ವ ಹಸಿವು ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಫುಡ್ ಬ್ಯಾಂಕ್ ವತಿಯಿಂದ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ನಾಗರಿಕರಿಗೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಾಜದಲ್ಲಿ ಹಸಿವಿನಿಂದ ಬಳಲುವವರ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಸೇವಾ ಕಾರ್ಯ…

    Continue reading
    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ

    ರಿಪ್ಪನ್‌ಪೇಟೆ: ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದ ಸರ್ವೇ ನಂ. 260/2ರಲ್ಲಿ 2 ಎಕರೆ 5 ಗುಂಟೆ ಪ್ರದೇಶವನ್ನು 1991-92ನೇ ಸಾಲಿನಲ್ಲಿ 23 ಮಂದಿ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳಿಗಾಗಿ ಮಂಜೂರು ಮಾಡಲಾಗಿತ್ತು. ಆದರೆ ಹಲವು ವರ್ಷಗಳಾದರೂ ಬಡಾವಣೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ…

    Continue reading

    You Missed

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ

    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ

    ಹಾರನಹಳ್ಳಿಯ ಗಣಪತಿ ವಿಗ್ರಹ ಕಲಾವಿದ ಶಿವಾನಂದಪ್ಪ ಅವರು ದೈವಾಧೀನರಾದರು.

    ಹಾರನಹಳ್ಳಿಯ ಗಣಪತಿ ವಿಗ್ರಹ ಕಲಾವಿದ ಶಿವಾನಂದಪ್ಪ ಅವರು ದೈವಾಧೀನರಾದರು.

    ರಿಪ್ಪನ್ ಪೇಟೆಯಲ್ಲಿ ದುರ್ಘಟನೆ: SSLC ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ರಿಪ್ಪನ್ ಪೇಟೆಯಲ್ಲಿ ದುರ್ಘಟನೆ: SSLC ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

    ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

    ರಿಪ್ಪನ್‌ಪೇಟೆಯ ವಿನಾಯಕ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

    ಏಪ್ರಿಲ್.5, 6ರಂದು ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಹೊಸನಗರದಲ್ಲಿ ಬೃಹತ್ ಪಾದಯಾತ್ರೆ

    ಏಪ್ರಿಲ್.5, 6ರಂದು ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಹೊಸನಗರದಲ್ಲಿ ಬೃಹತ್ ಪಾದಯಾತ್ರೆ