ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ

ರಿಪ್ಪನ್‌ಪೇಟೆ: ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದ ಸರ್ವೇ ನಂ. 260/2ರಲ್ಲಿ 2 ಎಕರೆ 5 ಗುಂಟೆ ಪ್ರದೇಶವನ್ನು 1991-92ನೇ ಸಾಲಿನಲ್ಲಿ 23 ಮಂದಿ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳಿಗಾಗಿ ಮಂಜೂರು ಮಾಡಲಾಗಿತ್ತು. ಆದರೆ ಹಲವು ವರ್ಷಗಳಾದರೂ ಬಡಾವಣೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ಆರಂಭವಾಗದೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟಗಾರರು ಪಟ್ಟಣದ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಕುರಿತು ಮಾನ್ಯ ಕಂದಾಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಭೂಮಿಯನ್ನು ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿ ಅಭಿವೃದ್ಧಿಪಡಿಸಲು ಈಗಾಗಲೇ ಆದೇಶ ನೀಡಿದ್ದರು. ಅದರಂತೆ ಹೊಸನಗರ ತಹಶೀಲ್ದಾರ್ ಅವರು ಮೇ 5, 2026ರಂದು ಕೆರೆಹಳ್ಳಿ ರಾಜಸ್ವ ನಿರೀಕ್ಷಕರಿಗೆ ಖಾಸಗಿ ವ್ಯಕ್ತಿಗಳ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿ, ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಆದರೆ ಇದುವರೆಗೆ ಸಂಪೂರ್ಣ ಒತ್ತುವರಿ ತೆರವು ಕಾರ್ಯ ನಡೆಯದಿರುವುದರಿಂದ ಸ್ಥಳೀಯರು ಹಾಗೂ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಭೂಮಿಯನ್ನು ತೆರವುಗೊಳಿಸಿ ಆಶ್ರಯ ಬಡಾವಣೆ ನಿರ್ಮಾಣದ ಜೊತೆಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವರದರಾಜ್, ಸ್ಥಳೀಯ ಮುಖಂಡ ಶೇಖರಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ವಿಶ್ವಕರ್ಮ ಸಮುದಾಯದ ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಆಯೋಜಿಸಲಾದ ಉಪಾಕರ್ಮ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ನೆರವೇರಿತು. ವೇದ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉಪಾಕರ್ಮವು ಆತ್ಮಶುದ್ಧಿ, ವೇದಾಧ್ಯಯನದ ಪುನರ್‌ಆರಂಭ ಹಾಗೂ ಧಾರ್ಮಿಕ ಸಂಸ್ಕಾರವನ್ನು ಸ್ಮರಿಸುವ ಪವಿತ್ರ…

    Continue reading
    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    You Missed

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.