ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

ಭಾರತೀಯ ಜನತಾ ಪಕ್ಷ, ಹೊಸನಗರ ಮಂಡಲ

ಬಿಜೆಪಿ ರೈತ ಮೋರ್ಚಾ ವತಿಯಿಂದ ಸವಯವ ಕೃಷಿ ಹಾಗೂ ಅಡಿಕೆ ಬೆಳೆ ಎಲೆಚುಕ್ಕಿ–ಕೊಳೆರೋಗ ನಿಯಂತ್ರಣ ಕುರಿತು ಯಶಸ್ವಿ ರೈತ ಕಾರ್ಯಾಗಾರ.

Bharatiya Janata Party, Hosanagara mandali

BJP Kisan Morcha Organizes Successful Farmers’ Workshop on Organic Farming and Control of Leaf Spot and Fruit Rot Diseases in Arecanut Cultivation.

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಜನಪರ ಹಾಗೂ ರೈತಪರ ಆಡಳಿತದ 12 ವರ್ಷಗಳ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣದ ಅಂಗವಾಗಿ, ಭಾರತೀಯ ಜನತಾ ಪಕ್ಷ ರೈತ ಮೋರ್ಚಾ, ಹೊಸನಗರ ವತಿಯಿಂದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ಳುಕೊಡು ಶ್ರೀ ಜಯಪ್ರಕಾಶ್ ಭಟ್ ಅವರ ತೋಟದಲ್ಲಿ ಸವಯವ ಕೃಷಿ ಹಾಗೂ ಅಡಿಕೆ ಬೆಳೆಯ ಎಲೆಚುಕ್ಕಿ ಮತ್ತು ಕೊಳೆರೋಗ ನಿಯಂತ್ರಣ ಕುರಿತು ರೈತರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸನಗರ ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀ ಕರಿಬಸವ ನಾಯಕ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಎಲೆಚುಕ್ಕಿ ಹಾಗೂ ಕೊಳೆರೋಗಗಳ ವೈಜ್ಞಾನಿಕ ನಿಯಂತ್ರಣ ಕ್ರಮಗಳು, ತಡೆಗಟ್ಟುವ ವಿಧಾನಗಳು ಮತ್ತು ಸವಯವ ಕೃಷಿಯ ಮಹತ್ವದ ಕುರಿತು ರೈತ ಬಂಧುಗಳಿಗೆ ಸಮಗ್ರ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬೆಳಕಿ ಗಣೇಶ್ ಅವರು ಉದ್ಘಾಟಿಸಿ, ರೈತಪರ ಚಟುವಟಿಕೆಗಳ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು.ಹಾಗೂ ಜಿಲ್ಲಾ ರೈತ ಮೋರ್ಚಾ ಸದಸ್ಯರು ಯೋಗೇoದ್ರಪ್ಪ ಗೌಡ್ರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಹೊಸನಗರ ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಹಿರೇಮಣತಿ ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿಟ್ಟೆಗದ್ದೆ ಪುರುಷೋತ್ತಮ ಹಾಗೂ ಶ್ರೀ ರಾವೇ ಪ್ರಕಾಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೊಸನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಸತೀಶ್ ಎನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾಗಾರ್ಜುನ ಸ್ವಾಮಿ, ಜಿಲ್ಲಾ ಪ್ರಮುಖರಾದ ಶ್ರೀ ತಿಮ್ಮಪ್ಪ ಬೆಳ್ಳೂರು, ಶ್ರೀ ನಾಗೇಂದ್ರಪ್ಪ ಗೌಡ, ಶ್ರೀ ರಾಮಣ್ಣ ಹೆದ್ದಾರಿಪುರ, ಶ್ರೀ ಕಲ್ಲೂರು ಆದರ್ಶ, ಶ್ರೀ ಶಾಮ್ ಸುಂದರ್, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಮತ್ತು ಬೂತ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು,ಹಾಗೂ ಜಿಲ್ಲಾ ಮಹಿಳಾ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಶ್ವೇತಾ ಜಿ. ಎನ್ಆಚಾರ್ಯ ಉಪಸ್ಥಿತರಿದ್ದರು ರೈತ ಬಂಧುಗಳು ಹಾಗೂ ಪಕ್ಷದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಅನ್ನದಾತರ ಸಬಲೀಕರಣ, ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಕೃಷಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷ ಸದಾ ಬದ್ಧವಾಗಿದೆ. ಇದೇ ಉದ್ದೇಶದೊಂದಿಗೆ ರೈತರ ಹಿತಕ್ಕಾಗಿ ಇಂತಹ ಜನಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ಆಯೋಜಿಸಲಾಗುತ್ತಿವೆ.

ರೈತರ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ವಿಶ್ವಕರ್ಮ ಸಮುದಾಯದ ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಆಯೋಜಿಸಲಾದ ಉಪಾಕರ್ಮ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯದಿಂದ ನೆರವೇರಿತು. ವೇದ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉಪಾಕರ್ಮವು ಆತ್ಮಶುದ್ಧಿ, ವೇದಾಧ್ಯಯನದ ಪುನರ್‌ಆರಂಭ ಹಾಗೂ ಧಾರ್ಮಿಕ ಸಂಸ್ಕಾರವನ್ನು ಸ್ಮರಿಸುವ ಪವಿತ್ರ…

    Continue reading
    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    You Missed

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ವತಿಯಿಂದ ಉಪಾಕರ್ಮ ಕಾರ್ಯಕ್ರಮ.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಉಪಾಕರ್ಮ ಕಾರ್ಯಕ್ರಮ ಹೊಸನಗರ ತಾಲೂಕು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಹೊಸನಗರದಲ್ಲಿ ವಿಶ್ವಕರ್ಮ ಸಮುದಾಯದ ಮಾಹಿತಿ ಕಾರ್ಯಾಗಾರ – ಮಹಿಳಾ ಸಮಾಜಕ್ಕೆ ಹೊಸ ಸಾರಥ್ಯ

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.

    ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹೊಸನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ.