*ಶೀಘ್ರದಲ್ಲೇ ‘ಲಕ್ಕಿ ಡ್ರಾ ಬಹುಮಾನ’ ಘೋಷಣೆ ದಿನಾಂಕ ಪ್ರಕಟ: ‘ರಿಪ್ಪನ್ ಪೇಟೆ ಕಲಾಕೌಸ್ತುಭ ಕನ್ನಡ ಸಂಘ’ ಸ್ಪಷ್ಟನೆ*
ರಿಪ್ಪನ್‌ಪೇಟೆ: ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕರುನಾಡ ಹಬ್ಬ’ದ ಲಕ್ಕಿ ಡ್ರಾ ಫಲಿತಾಂಶ ಘೋಷಣೆ ವಿಳಂಬವಾಗುತ್ತಿರುವ ಕುರಿತು ಆಯೋಜಕರು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕಳೆದ ನವೆಂಬರ್ 28, 29 ಮತ್ತು 30ರಂದು ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅದ್ಧೂರಿ ‘ಕರುನಾಡ ಹಬ್ಬ’ ಆಚರಿಸಲಾಗಿತ್ತು. ಈ ಸಂಭ್ರಮದ ಭಾಗವಾಗಿ ಬೈಕ್ ಸೇರಿದಂತೆ ವಿವಿಧ ಆಕರ್ಷಕ ಬಹುಮಾನಗಳ ‘ಲಕ್ಕಿ ಡ್ರಾ’ ಆಯೋಜಿಸಲಾಗಿತ್ತು.
*ವಿಳಂಬಕ್ಕೆ ಕಾರಣವೇನು?*
ಲಕ್ಕಿ ಡ್ರಾ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಒಟ್ಟು ಲಭ್ಯವಿದ್ದ ಟಿಕೆಟ್‌ಗಳಲ್ಲಿ ಕೇವಲ 200 ರಿಂದ 300 ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದವು. ಈ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗಿ ಬಂದಿದ್ದರಿಂದ ನಿಗದಿತ ಸಮಯದಲ್ಲಿ ಬಹುಮಾನ ಘೋಷಿಸಲು ಸಾಧ್ಯವಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
*ಸಾರ್ವಜನಿಕರಲ್ಲಿ ಸಂಘದಿಂದ ಈ ವಿನಂತಿ*
- ಮಾರ್ಚ್ 31ರ ಒಳಗಾಗಿ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸಂಘದ ಎಲ್ಲಾ ಸದಸ್ಯರುಗಳು ಸೇರಿ ಲಕ್ಕಿ ಡ್ರಾ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.







